ಗೀತ ಸಿನಿಮಾ ದ ಜೊತೆ ಜೊತೆಯಲಿ ಹಾಡು ಬಹಳ ಸುಂದರವಾದದ್ದು.
ಇಳಯರಾಜ ಅವರ ಸಂಗೀತ ಸಂಯೋಜನೆ ಯಲ್ಲಿ ಮೂಡಿ ಬಂದ ಈ ಹಾಡಿನಲ್ಲಿ ಇರುವವರು ಶಂಕರ್ ನಾಗ ಮತ್ತು ಅರುಂಧತಿ ನಾಗ ಅವರ ಸಹೋದರಿ ಅಕ್ಷತ ರಾವ್.
ಹಾಡಿನ ನಡುವೆ ಇರುವ ಆಲಾಪ ದ ಧ್ವನಿ ಸ್ವತಃ ಇಳಯರಾಜ ಅವರದೇ.
ನನಗೆ ಶಂಕರ್ ನಾಗ ನೆನಪಿಸುವ ಹಾಡುಗಳೆಂದರೆ ....ಒಂದೇ ಒಂದು ಆಸೆಯು ನಿನ್ನ ಮುದ್ದಾಡಲು ,ನಲಿವ ಗುಲಾಬಿ ಹೂವೆ .., ಹೊಸ ಬಾಳು ನಿನ್ನಿಂದ ....
ಅವರ ಹಾಡು ಗಳಲ್ಲಿ ಅವರ ಡಾನ್ಸ್ ಸ್ಟೆಪ್ಸ್ ಒಂದು ವಿಶೇಷ .
ತಮ್ಮ ಅಲ್ಪಯುಷ್ಯ ದ ಜೀವನದಲ್ಲಿ ಬಿಟ್ಟು ಹೋದ ಸಿನಿಮಾ ನೆನಪಿನ ಗುರುತುಗಳು ಅನೇಕ .ಒಂದು ಕಾಲದಲ್ಲಿ ಶಂಕರ್ ನಾಗ -ಮಂಜುಳಾ ಜೋಡಿ ಪ್ರಸಿದ್ದವಾಗುವ ಭರವಸೆ ಮೂಡಿತ್ತು.
ಆದರೆ ವಿಧಿ ಮೂಡಿಸುವ ಗೆರೆಗಳು ಅಳುಕಿಸಲಾಗದನ್ತಹುದು.ಸೆಪ್ಟೆಂಬರ್ ೩೦ ರಂದು ಕಾರ್ ಅಪಘಾತ ಮತ್ತು ಅವರ ಸಾವು ಕನ್ನಡ ಚಿತ್ರರಂಗ ಮತ್ತು ಅಣ್ಣ ಅನಂತ್ ನಾಗ ಅವರಿಗೆ ತುಂಬಾ ತುಂಬಾ ನೋವು ತಂದಂತ ದುರಂತ.
ಇನ್ನು ಹಾಡಿನ ಸಾಹಿತ್ಯ ದ ಬಗ್ಗೆ ಬರೆಯಲಾಗಿ ;
ಪ್ರೇಮಿಸುವ ಕಾಲದಲ್ಲಿ ಮಾತುಗಳು ,ಭರವಸೆಗಳು ಕೊಡು ವ ಸುಖ ಹೇಳತೀರದು.
ಪ್ರೀತಿ ತರುವ ಕನವರಿಕೆಗಳು ನನಸಾದಾಗ ಪ್ರೇಮಿಗಳು ಪಡುವ ಆನಂದ ಹೇಳಲಾತೀತ!
ಬಹಳಷ್ಟು ಸಲ ಕಾರಣಾ ನ್ತರ ಗಳಿಂದ ಪ್ರೇಮಿಗಳು ದೂರವಾಗುವುದೇ ಹೆಚ್ಚು.
ಜೊತೆ ಜೊತೆಯಾಗಿ ಕೊನೆಗಾಲದವರೆಗೂ ಹರುಷ ತರುವ ಭರವಸೆ ಕೊಡುವ ಪ್ರೇಮಿ....
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಬಯಕೆ ....ಪಕ್ಷಿಗಳನ್ನು ಮುದ್ದಿನಿಂದ ಮಾತಾಡಿಸಿ,...:).ಒಂದು ಕನಸೇ ಸರಿ.